ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಮಹಾದುರಂತ: 4 ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿದ ಪ್ರಯಾಣಿಕರು!

​ಬೆಂಗಳೂರು/ಹುಬ್ಬಳ್ಳಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್ ಆಗಲಾಗದೆ ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ಘಟನೆ ನಡೆದಿದೆ. ಇದರಿಂದ ನೂರಾರು ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದು, ಅಂತಿಮವಾಗಿ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ​ಘಟನೆಯ ವಿವರ: ​ಹೈದರಾಬಾದ್‌ನಿಂದ ಹೊರಟಿದ್ದ Fly91 ಏರ್ ಲೈನ್ಸ್ ಸಂಸ್ಥೆಯ IC3401 (ATR Turboprop) ವಿಮಾನವು ನಿಗದಿತ ಸಮಯದಂತೆ ಸಂಜೆ 4:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ…

Read More

​ಹುಬ್ಬಳ್ಳಿ: ನಾಳೆ ಶ್ರೀ ಜ್ಯೋತಿಭಾ ದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ

ಹುಬ್ಬಳ್ಳಿ: ಇಲ್ಲಿನ ಬಂಕಾಪುರ ಚೌಕದ ಸಮೀಪವಿರುವ ಕುಲಕರ್ಣಿ ಓಣಿಯ (ಯಲ್ಲಾಪುರ ಓಣಿ) ಶ್ರೀ ಕೇದಾರಲಿಂಗ (ಜ್ಯೋತಿಭಾ) ದೇವಾಲಯದಲ್ಲಿ ಅಕ್ಷಯ ತೃತೀಯಾ ಹಾಗೂ ಶ್ರೀ ಜ್ಯೋತಿಭಾ ದೇವರ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ನಿಮಿತ್ತ ಏಪ್ರಿಲ್ 20ರ ಸೋಮವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ. ​ಅಂದು ಬೆಳಿಗ್ಗೆ 8:00 ಗಂಟೆಗೆ ಕಲಶ ಸ್ಥಾಪನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ತದನಂತರ ಗಣಹೋಮ, ರುದ್ರ ಹವನ ಹಾಗೂ ಪೂರ್ಣಾಹುತಿ ನೆರವೇರಲಿವೆ. ಬೆಳಿಗ್ಗೆ 11:30 ಗಂಟೆಯಿಂದ ಶ್ರೀ ಜ್ಯೋತಿಭಾ ದೇವರಿಗೆ…

Read More

ಹುಬ್ಬಳ್ಳಿ: ಯುವತಿಗೆ ಪೀಡೆ; ಕಿಡಿಗೇಡಿಗೆ ಸಾರ್ವಜನಿಕವಾಗಿ ಚಪ್ಪಲಿ ಸೇವೆ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿಗ್ಗಾಂವಿ ಪ್ಲಾಟ್‌ನಲ್ಲಿ ಯುವತಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಪುಂಡನಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ ಘಟನೆ ನಡೆದಿದೆ. ​ಸ್ಥಳೀಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಅದೇ ಬಡಾವಣೆಯ ಯುವತಿಯನ್ನು ಸತತವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ವಿಷಯ ತಿಳಿದ ಯುವತಿಯ ಪೋಷಕರು ಹಾಗೂ ಸ್ಥಳೀಯ ಮಹಿಳೆ ಆತನನ್ನು ರಸ್ತೆಗೆ ಎಳೆದು ತಂದು ಧರ್ಮದೇಟು ನೀಡಿದ್ದಾರೆ. ಸದ್ಯ ಆರೋಪಿಯನ್ನು ವಿದ್ಯಾನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ…

Read More

ನಿರೀಕ್ಷಿತ ಅಂಕ ಬರಲಿಲ್ಲವೆಂದು ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾನು ನಿರೀಕ್ಷಿಸಿದಷ್ಟು ಅಂಕಗಳು ಬರಲಿಲ್ಲ ಎಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಗರದ ಉಣಕಲ್‌ನ ಸಿದ್ಧಕಲ್ಯಾಣ ನಗರದಲ್ಲಿ ನಡೆದಿದೆ. ​ಹುಬ್ಬಳ್ಳಿಯ ವಿದ್ಯಾನಗರದ ಕನಕದಾಸ ಕಾಲೇಜಿನ ವಿದ್ಯಾರ್ಥಿನಿ ಶ್ರಾವಣಿ ಮಾರುತಿ ಕಾಳೆ (18) ಮೃತಪಟ್ಟ ದುರ್ದೈವಿ. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರಾವಣಿ, ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 71 ರಷ್ಟು ಅಂಕಗಳನ್ನು ಪಡೆದಿದ್ದಳು. ಆದರೆ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಪ್ರತಿಶತ ಅಂಕಗಳನ್ನು ಪಡೆಯಲೇಬೇಕೆಂದು…

Read More

ಉತ್ತರ ಕರ್ನಾಟಕದ ಕಲಾವಿದರಿಗೆ ಸನ್ಮಾನ: ರಂಗಭೂಮಿ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ – ಹಿರಿಯೂರು ರಾಘವೇಂದ್ರ

​ಹುಬ್ಬಳ್ಳಿ: ಉತ್ತರ ಕರ್ನಾಟಕವು ರಂಗಭೂಮಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನೂರಾರು ಕಲಾವಿದರ ಬದುಕಿಗೆ ಆಸರೆಯಾಗಿ ನಿಂತಿದೆ ಎಂದು ಖ್ಯಾತ ಚಿತ್ರ ನಿರ್ದೇಶಕ ಹಾಗೂ ಸಾಹಿತಿ ಹಿರಿಯೂರು ರಾಘವೇಂದ್ರ ಅಭಿಪ್ರಾಯಪಟ್ಟರು. ​ನಗರದ ಭವಾನಿ ನಗರದಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಿರಿಯ ರಂಗಕರ್ಮಿ, ಸಿನಿಮಾ ಹಾಗೂ ಧಾರವಾಹಿ ನಟಿ ಮಾಲತೇಶ್ರೀ ಮೈಸೂರು ಅವರಿಗೆ ಏರ್ಪಡಿಸಲಾಗಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಿನಿಮಾ ಮತ್ತು ಧಾರವಾಹಿಗಳ ಮೂಲಕ ಮನೆಮಾತಾಗಿರುವ ಮಾಲತೇಶ್ರೀ…

Read More

​ಮಾ. 11ರಿಂದ ಆರೋಗ್ಯ ಇಲಾಖೆ ನೌಕರರ ಮುಷ್ಕರ: ಹೊರರೋಗಿ ಸೇವೆ ವ್ಯತ್ಯಯ ಸಾಧ್ಯತೆ

ಹುಬ್ಬಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 11ರಿಂದ ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ತಿಳಿಸಿದರು. ​ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಷ್ಕರದ ರೂಪುರೇಷೆಗಳ ಬಗ್ಗೆ ಈ ಕೆಳಗಿನಂತೆ ಮಾಹಿತಿ ನೀಡಿದರು: ​ಮುಷ್ಕರದ ಹಂತಗಳು:

Read More

ಅಂಬೇಡ್ಕರ್ ಮೂರ್ತಿಗೆ ಅವಮಾನ ಹಾಗೂ ದಲಿತರ ಮೇಲೆ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಮನವಿ

​ಹುಬ್ಬಳ್ಳಿ: ಶಿಗ್ಗಾಂವ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಅವಮಾನ ಎಸಗಿರುವ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಘಟನೆಯನ್ನು ಖಂಡಿಸಿ ‘ಜೈ ಭೀಮ ಯುವ ಶಕ್ತಿ ಸೇನಾ’ ಸಂಘಟನೆಯು ಶುಕ್ರವಾರ ಹುಬ್ಬಳ್ಳಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ​ಹೊಸೂರು ಗ್ರಾಮದಲ್ಲಿ ಜನವರಿ 26 ರಂದು ರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ಅವರ ಮೂರ್ತಿಗೆ ಸಗಣಿ ಬಳೆದು ವಿಕೃತಿ ಮೆರೆದಿದ್ದಾರೆ ಎಂದು ಸಂಘಟನೆಯು ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಅಸಮಾಧಾನ…

Read More

ಹುಬ್ಬಳ್ಳಿಯಲ್ಲಿ ಸೂರ್ಯನಾರಾಯಣ ಸ್ವಾಮಿ ಜಯಂತಿ ಸಂಭ್ರಮ: ಅದ್ಧೂರಿ ಮೆರವಣಿಗೆಗೆ ಚಾಲನೆ

ಹುಬ್ಬಳ್ಳಿ: ನಗರದ ಎಸ್ ಕೆ ಕೆ ಸಮಾಜ, ಸೂರ್ಯವಂಶ ಕ್ಷತ್ರಿಯ ಕಲಾಲ್ ಸಮಾಜ ಹಾಗೂ ಯುವಕ ಮತ್ತು ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಥಸಪ್ತಮಿ ಪ್ರಯುಕ್ತ ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಜಯಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಮರಾಠಾಗಲ್ಲಿಯ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ವಾದ್ಯ ಮೇಳಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಹುಬ್ಬಳ್ಳಿ ರುದ್ರಾಕ್ಷಿ ಮಠದ ಪರಮಪೂಜ್ಯ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ…

Read More

ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳಿಸಿದ ‘ಶಿವಲಿಂಗಪ್ಪ ಅಗಡಿ ಮಾರ್ಗ’ ನಾಮಫಲಕ ಮರುಸ್ಥಾಪನೆಗೆ ಒತ್ತಾಯ

ಹುಬ್ಬಳ್ಳಿ, ಜ. 14: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ದಿ. ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಅವರ ಹೆಸರಿನ ರಸ್ತೆ ನಾಮಫಲಕಗಳನ್ನು, ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಶೀಘ್ರವಾಗಿ ಮರುಸ್ಥಾಪಿಸುವಂತೆ ಅಗಡಿ ಕುಟುಂಬಸ್ಥರು ಹಾಗೂ ವಾರ್ಡಿನ ನಾಗರಿಕರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ. ​ಈ ಕುರಿತು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಶಿವಲಿಂಗಪ್ಪ ಅಗಡಿ ಅವರು ಎರಡು ಅವಧಿಗೆ ಕಾರ್ಪೊರೇಟರ್ ಆಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ಮೇಯರ್ ಆಗಿ ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು…

Read More

ಹುಬ್ಬಳ್ಳಿ: ಹಳೆ ದ್ವೇಷಕ್ಕೆ ರಕ್ತಪಾತ: ಅಣ್ಣನಿಗೆ 7 ಬಾರಿ ಚಾಕು ಇರಿದು ಕೊಲೆಗೆ ಯತ್ನಿಸಿದ ತಮ್ಮ

​ಹುಬ್ಬಳ್ಳಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸ್ವಂತ ತಮ್ಮನೇ ಅಣ್ಣನಿಗೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿದ ಘೋರ ಘಟನೆ ನಗರದ ಹಳೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ. ​ಗಂಭೀರವಾಗಿ ಗಾಯಗೊಂಡವರನ್ನು ಮಲ್ಲೇಶ್ ಪೂಜಾರ (೪೨) ಎಂದು ಗುರುತಿಸಲಾಗಿದೆ. ಮಲ್ಲೇಶ್ ಅವರು ತಮ್ಮ ಮನೆಯ ಮುಂಭಾಗದಲ್ಲಿ ಮದ್ಯದ ಅಮಲಿನಲ್ಲಿ ಕುಳಿತಿದ್ದರು. ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ಅವರ ಸಹೋದರ ಪ್ರದೀಪ್, ಹಳೆಯ ದ್ವೇಷದ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಪ್ರದೀಪ್ ತನ್ನ ಬಳಿಯಿದ್ದ ಚಾಕುವಿನಿಂದ…

Read More